ಉಷ್ಣಮಾಪನ
ಉಷ್ಣತೆಯನ್ನು ಅಳೆಯುವ ಕ್ರಿಯೆ (ಧರ್ಮೋಮೆಟ್ರಿ), ಅಳೆಯುವ ಸಾಧನದ ಹೆಸರು ಉಷ್ಣತಾಮಾಪಕ. ಉಷ್ಣತಾಮಾಪಕದಲ್ಲಿ ಎರಡು ನಿಶ್ಚಿತ ಬಿಂದುಗಳಿವೆ: (i) ಒಂದು ಶಿಷ್ಟ ವಾಯುಭಾರ ಒತ್ತಡದಲ್ಲಿ ಕರಗುತ್ತಿರುವ ಶುದ್ಧ ಬರ್ಫದಲ್ಲಿ ಉಷ್ಣತಾಮಾಪಕವನ್ನು ಅದ್ದಿದಾಗ ಪಾದರಸ ಸ್ತಂಭ ಸೂಚಿಸುವ ಕೆಳಬಿಂದು; (ii) ಅಷ್ಟೇ ಒತ್ತಡದಲ್ಲಿ ಕುದಿಯುತ್ತಿರುವ ಶುದ್ದ ನೀರಿನಲ್ಲಿ ಅದನ್ನು ಅದ್ದಿದಾಗ ಸ್ತಂಭ ಸೂಚಿಸುವ ಮೇಲುಬಿಂದು. (13.5951 ಗ್ರಾಂ/ಘ.ಸೆಂ.ಮೀ. ಸಾಂದ್ರತೆ ಇರುವ ಪಾದರಸದ ಸ್ತಂಭವನ್ನು 760 ಮಿ.ಮೀ. ಎತ್ತರಕ್ಕೆ ಗುರುತ್ತ್ವಾಕರ್ಷಣೆಯ ಬೆಲೆ 980.665 ಸೆಂ.ಮೀ./ಸೆ. ಇರುವ ಸ್ಥಳದಲ್ಲಿ ಏರಿಸುವ ಒತ್ತಡವೇ ಒಂದು ಶಿಷ್ಟ ವಾಯುಭಾರ ಒತ್ತಡ: ಇದನ್ನು ಡೈನುಗಳಲ್ಲಿ ವ್ಯಕ್ತಪಡಿಸಬೇಕು.) ಈ ಬಿಂದುಗಳ ಹೆಸರು ಕ್ರಮವಾಗಿ ಬರ್ಫಬಿಂದು ಮತ್ತು ಉಗಿಬಿಂದು. ಇವೆರಡು ಬಿಂದುಗಳ ನಡುವಿನ ಅಂತರದ ಹೆಸರು ಮೂಲಾಂತರ (ಫಂಡಮೆಂಟಲ್ ಇಂಟರ್ವಲ್).

ಉಷ್ಣಪಾಮಾನ ಪದ್ಧತಿ
ಬರ್ಫಬಿಂದುವಿನ ಉಷ್ಣತೆ
ಉಗಿಬಿಂದುವಿನ ಉಷ್ಣತೆ
ಮೂಲಾಂತರದ ಎಷ್ಟನೆಯ ಅಂಶ 1'ಗೆ ಸಮಾನ

ಸೆಂಟಿಗ್ರೇಡ್, (C-ಸೆಲ್ಸಿಯಸ್)
0ಲಿ C
100ಲಿ C
1/100

ಫ್ಯಾರನ್ ಹೀಟ್ ,F
32ಲಿ F
212ಲಿF
1/180

ರೇಹಿಮೂರ್,R
0ಲಿ R
80ಲಿ R
1/80

ಇವುಗಳ ಪರಸ್ಪರ ಸಂಬಂಧ ಹೀಗಿದೆ:

	ಒಂದು ಉಷ್ಣತಾಮಾಪಕದ ರಚನೆಯ ತಾತ್ತ್ವಿಕ ತಳಹದಿ ಹೀಗಿದೆ. ವಸ್ತುವಿನ ಮೇಲೆ ಉಷ್ಣಪ್ರಯುಕ್ತವಾದಾಗ (ಎಂದರೆ ವಸ್ತುವನ್ನು ಕಾಯಿಸಿದಾಗ) ಅದರಲ್ಲಿ ಭೌತ ಬದಲಾವಣೆಗಳುಂಟಾಗುತ್ತವೆ; ಬದಲಾವಣೆಯ ಸ್ವರೂಪ ವಸ್ತುವಿನ ರಚನೆ ಸ್ಥಿತಿಗಳನ್ನೂ ಅವಲಂಬಿಸಿವೆ; ಭೌತ ಬದಲಾವಣೆಯನ್ನು ಆಧರಿಸಿ ವಸ್ತುವಿನ ಉಷ್ಣತೆಯನ್ನು ಅಳೆಯಬಹುದು. ಸೆಂಟಿಗ್ರೇಡ್, ಫ್ಯಾರನ್‍ಹೀಟ್ ಮತ್ತು ರೇಒಮೂರ್ ಉಷ್ಣತಾಮಾನ ಪದ್ಧತಿಗಳು ಈ ರೀತಿ ರೂಪತಳೆದಂಥವು. ಆದರೆ ಉಷ್ಣಗತಿಶಾಸ್ತ್ರದ (ನೋಡಿ- ಉಷ್ಣಗತಿವಿಜ್ಞಾನ) ಆಧಾರದ ಮೇಲೆ ರಚಿತವಾಗಿರುವ ಕೆಲ್ವಿನ್ ನಿರಪೇಕ್ಷಮಾನ ಯಾವುದೇ ವಸ್ತುವಿನ ಗುಣಲಕ್ಷಣಗಳನ್ನೂ ಅವಲಂಬಿಸಿಲ್ಲ. ಎಲ್ಲ ಒತ್ತಡಗಳಲ್ಲಿಯೂ ಬಾಯಿಲನ ನಿಯಮವನ್ನು ಪಾಲಿಸುವ ಆದರ್ಶ ಅನಿಲದ (ಐಡಿಯಲ್ ಗ್ಯಾಸ್) (ನೋಡಿ- ಅಣುಚಲನವಾದ,-ವಸ್ತುವಿನ) ಉಷ್ಣತಾಮಾನಕ್ಕೆ ನಿರಪೆಕ್ಷಮಾನ ಅತ್ಯುತ್ತಮ ವಿಧಾನವಾಗಿದೆ.

ಭಿನ್ನ ಗುಣಗಳ ಆಧಾರದ ಮೇಲೆ ಉಷ್ಣ ಮಾಪನ ವಿಧಾನಗಳನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ಮುಂದೆ ಹೇಳಿದೆ.
ವಿಕಾಸ ಸಂಕೋಚನ ಗುಣವನ್ನು ಆಧರಿಸಿ ಉಷ್ಣತಾಮಾನ: 39ಲಿ ಸೆ.ನಿಂದ 365ಲಿ ಸೆಂ.ನವರೆಗೆ ಪಾದರಸವನ್ನೂ 200ಲಿ ಸೆಂ. ವರೆಗಿನ ಭಿನ್ನ ಮಿತಿಗಳಲ್ಲಿ ಆಲ್ಕೊಹಾಲ್, ಟೋಲ್ವಿನ್, ಪೆಂಟೇನ್ ಮುಂತಾದುವನ್ನೂ ಉಪಯೋಗಿಸಿ ಉಷ್ಣತಾಮಾಪಕಗಳನ್ನು ರಚಿಸಬಹುದು. ಇಂಥವು ಸೂಚಿಸುವ ಉಷ್ಣಾಂಕಗಳು (ಉಷ್ಣತೆಯನ್ನು ಸೂಚಿಸುವ ಅಂಕಿಗಳು) ಎಲ್ಲ ಸಂದರ್ಭಗಳಲ್ಲಿಯೂ ನೈಜ ಉಷ್ಣತೆಯನ್ನು ಪೂರ್ಣವಾಗಿ ತಿಳಿಸುತ್ತವೆ ಎನ್ನಲಾಗುವುದಿಲ್ಲ. ಉದಾಹರಣೆಗೆ. 0ಲಿ-50ಲಿ ಅಂತರದಲ್ಲಿ ಉಷ್ಣಾಂಕಗಳು ನೈಜ ಉಷ್ಣತೆಯ ಪ್ರತೀಕಗಳಾಗಿದ್ದರೆ 400ಲಿ ಮಿತಿ ದಾಟಿದಾಗ ಸರಾಸರಿ 0.5ಲಿ ದೋಷ ತಲೆದೋರಬಹುದು. ಈ ಕೆಳಗಿನ ಕೆಲವು ಮುಖ್ಯ ಕಾರಣಗಳಿಂದ ಉಷ್ಣತಾಮಾಪನದಲ್ಲಿ ದೋಷಗಳು ಮೂಡುತ್ತವೆ. 1 ಲೋಮನಾಳದ ವ್ಯಾಸದಲ್ಲಿ ಭಿನ್ನತೆಗಳು. 2 ನಿಶ್ಚಿತ ಬಿಂದುಗಳನ್ನು (ಬರ್ಫಬಿಂದು, ಉಗಿಬಿಂದು) ಗುರುತಿಸುವಲ್ಲಿನ ಲೋಪಗಳು, 3 ಕೆಳ ಬಿಂದುವಿನ ಸ್ಥಾನಾಂತರತೆ, ಇದನ್ನು ಮೊದಲು ಸಮರ್ಪಕವಾಗಿಯೇ ಗುರುತಿಸಿದ್ದರೂ ಮುಂದೆ ಗಾಜಿನ ಸ್ವರೂಪ ವ್ಯತ್ಯಾಸದಿಂದ ಈ ಲೋಪ ಉಂಟಾಗುತ್ತದೆ. 4 ಆಂತರಿಕ ಒತ್ತಡದಿಂದ ಪಾದರಸದ ಅಥವಾ ಬಳಸಿದ ಇತರ ದ್ರವದ ಸ್ತಂಭದ ಕ್ರಮೇಣ ಇಳಿತ, ಉಷ್ಣತಾಮಾಪಕವನ್ನು ನೆಲಕ್ಕೆ ಲಂಬವಾಗಿ ಉಪಯೋಗಿಸಿದಾಗ ದ್ರವದ ಸ್ತಂಭದ ಮೇಲಿನ ಸ್ತರಗಳ ಒತ್ತಡ ಕೆಳಗಿನ ಸ್ತರಗಳ ಮೇಲೆ ಹೆಚ್ಚು ಹೆಚ್ಚಾಗಿ ಪತನವಾಗುತ್ತದೆ. ಆಗ ಸ್ತಂಭದ ಮೇಲು ಕೊನೆ ಸ್ವಲ್ಪವಾದರೂ ತಗ್ಗುವುದು. ಆದ್ದರಿಂದ ಉಷ್ಣತಾಮಾಪಕವನ್ನು ಮಟ್ಟಸವಾಗಿಟ್ಟು ಅಳತೆ ಮಾಡಿದಾಗ ದೊರೆಯುವ ಉಷ್ಣತಾಂಕ ಲಂಬವಾಗಿಟ್ಟು ಅಳತೆ ಮಾಡಿದಾಗ ದೊರೆಯುವ ಉಷ್ಣತಾಂಕಕ್ಕಿಂತ ಸ್ವಲ್ಪ ಹೆಚ್ಚು ಇರುವುದು.

	ಒಂದು ವಸ್ತುವಿನ ನೈಜ ಉಷ್ಣತೆಯನ್ನು ತಿಳಿಯಬೇಕೆಂದಾಗ ಮೇಲಿನ ಲೋಪ ದೋಷಗಳ ಕಡೆ ಲಕ್ಷ್ಯವಿಡಬೇಕು.

	ವೈದ್ಯಕೀಯ ಉಷ್ಣತಾಮಾಪಕ (ಕ್ಲಿನಿಕಲ್ ಥರ್ಮೋಮೀಟರ್): ಮನುಷ್ಯ ದೇಹದ ಉಷ್ಣತೆಯನ್ನು ಅಳೆಯಲು ಬಳಸುವ ಸಾಧನ. ಜ್ವರಮಾಪಿ ಎಂದೂ ಹೆಸರಿದೆ. 95ಲಿ ಫ್ಯಾ.ನನಿಂದ 110ಲಿ ಫ್ಯಾ.ವರೆಗೆ ಇದರಲ್ಲಿ ಗುರುತುಗಳಿವೆ. 98.4ಲಿ ಯಲ್ಲಿ ಒಂದು ಸ್ಪಷ್ಟ ಗುರುತಿದೆ(ಇದು ದೇಹದ ಸಾಮಾನ್ಯ ಉಷ್ಣತೆಯ ಮಟ್ಟ.

ಚಿತ್ರ-1

 ಈ ಉಷ್ಣತಾಮಾಪಕದ ಬುರುಡೆಯನ್ನು ಬಾಯೊಳಗೆ ನಾಲಗೆಯ ಕೆಳಗೆ ಅಥವಾ ಬಗಲಲ್ಲಿ ಇರಿಸಿದಾಗ ದೇಹದ ಉಷ್ಣತೆಯಿಂದ ವಿಕಾಸಗೊಳ್ಳುವ ಪಾದರಸ ಲೋಮನಾಳದ ಮೂಲಕ ಏರಿ ಅದರ ಸ್ತಂಭ ಒಂದು ಮಿತಿಯಲ್ಲಿ ನಿಲ್ಲುವುದು. ಈ ಕೊನೆ ಬಿಂದು ತೋರಿಸುವ ಗುರತೇ ದೇಹದ ಉಷ್ಣತೆ. ಬುರುಡೆಯನ್ನು ದೇಹಸಂಪರ್ಕದಿಂದ ಸರಿಸಿದಾಗ ಪಾದರಸ ಸ್ತಂಭ ಸಂಕೋಚಗೊಂಡು ಹಿಂದಕ್ಕೆ ಇಳಿಯಬೇಕು. ಆದರೆ ಲೋಮನಾಳದ ಆರಂಭದಲ್ಲಿ ಅದನ್ನೇ ಸ್ವಲ್ಪ ತಿರುಚಿ ಪಾದರಸದ ಹಿಂಜರಿತಕ್ಕೆ ಅಲ್ಲೊಂದು ಅಡಚಣೆ ರಚಿಸಲಾಗಿದೆ. ಹೀಗಾಗಿ ಏರಿದ ಸ್ತಂಭ ಅಲುಗಾಡದೇ ಅದೇ ಸ್ಥಾನದಲ್ಲಿ ನಿಂತಿರುವುದು. ಒಂದು ಅಯಸ್ಕಾಂತವನ್ನು ಉಷ್ಣತಾಮಾಪಕದ ಗಾಜಿನ ಮೇಲೆ ಬುರುಡೆಯೆಡೆಗೆ ಸರಿಸುವುದರ ಮೂಲಕ ಅಥವಾ ಬುರುಡೆ ಕೆಳಮುಖವಾಗಿರುವಂತೆ ಇನ್ನೊಂದು ಕೊನೆಯನ್ನು ಹಿಡಿದು ಕೊಡುವುದರ ಮೂಲಕ ಪಾದರಸ ಸ್ತಂಭವನ್ನು ಬುರುಡೆಗೆ ಮರಳುವಂತೆ ಮಾಡಬಹುದು.

	ಗರಿಷ್ಠ ಮತ್ತು ಕನಿಷ್ಠ ಉಷ್ಣತಾಮಾಪಕ (ಮ್ಯಾಕ್ಸಿಮಂ ಅಂಡ್ ಮಿನಿಮಮ್ ಥರ್ಮೋಮೀಟರ್): ದಿನದ ಗರಿಷ್ಣ ಮತ್ತು ಕನಿಷ್ಠ ಉಷ್ಣತೆಗಳನ್ನು ತೋರಿಸುವ ಸಾಧನ. ಇದರಲ್ಲಿ ಂ ಯಿಂದ ಅ ವರೆಗೆ ಆಲ್ಕೋಹಾಲ್, ಅಯಿಂದ ಆ ವರೆಗೆ ಪಾದರಸ, ಆಯಿಂದ ಇ ವರೆಗೆ ಆಲ್ಕೊಹಾಲ್ ಮತ್ತು ಇ ಬುರುಡೆಯ ಮೇಲಿನ ಭಾಗದಲ್ಲಿ ಗಾಳಿ ತುಂಬಿವೆ. I1 ಮತ್ತು I2 ಎಂಬ ಎರಡು ಸೂಚಕಗಳು ಪಾದರಸ ಸ್ತಂಭ ಏರಿದಂತೆ ಸೂಚಕಗಳು ಮೇಲೆ ಸರಿದು ಅಲ್ಲೆ ಗಾಜಿನ ಒಳಮೈಗೆ ಅಂಟಿ ನಿಲ್ಲುತ್ತವೆ(ಎಂದರೆ, ತರುವಾಯ ಸ್ತಂಭ ಕೆಳಗೆ ಸರಿದರೆ ಸೂಚಕ ಇಳಿಯುವುದಿಲ್ಲ. ಈ ಉಷ್ಣತಾಮಾಪಕದಲ್ಲಿ ಅಂಕಿಗಳು ಉಷ್ಣತೆಯನ್ನು ಫ್ಯಾರನ್‍ಹೀಟ್ ಮಾನದಲ್ಲಿ ಸೂಚಿಸುವುವು. ದಿನದ ಉಷ್ಣತೆ ಏರಿದಂತೆ ಂಃಅ ವಿಭಾಗದ ಆಲ್ಕೋಹಾಲ್ ವಿಕಾಸಗೊಂಡು ಪಾದರಸವನ್ನು ಅಆ ದಿಶೆಯಲ್ಲಿ ತಳ್ಳುವುದು. ದಿನದ ಗರಿಷ್ಠ ಉಷ್ಣತೆಗೂ ಈ ತಳ್ಳುವಿಕೆಗೂ ಹೊಂದಾಣಿಕೆ ಇದೆ. ಆದ್ದರಿಂದ ಗರಿಷ್ಠ ಉಷ್ಣತೆಯ ವೇಳೆ ಪಾದರಸ ಸ್ತಂಭ ಆಇ ವಿಭಾಗದಲ್ಲಿ ಗರಿಷ್ಠ ಎತ್ತರಕ್ಕೆ ಏರಿರುತ್ತದೆ. ಆಗ I1 ಸೂಚಕ ತೋರಿಸುವ ಅಂಕಿಯೆ ಗರಿಷ್ಠ ಉಷ್ಣತೆ. ಉಷ್ಣತೆ ತಗ್ಗಿದಂತೆ ಅಃಂ ವಿಭಾಗದ ಆಲ್ಕೋಹಾಲ್ ಸಂಕೋಚಗೊಳ್ಳುವುದರಿಂದ ಪಾದರಸ ಸ್ತಂಭ ಅಃ ದಿಶೆಯಲ್ಲಿ ಮೇಲೆ ಏರುವುದು. ಕನಿಷ್ಠ ಉಷ್ಣತೆಯ ವೇಳೆ ಈ ಏರಿಕೆ ಗರಿಷ್ಠವಾಗಿರುತ್ತದೆ. ಆಗ I2 ಸೂಚಕ ತೋರಿಸುವ ಅಂಕಿಯೇ ದಿನದ ಕನಿಷ್ಠ ಉಷ್ಣತೆ. ಗಾಜಿನ ಹೊರಭಾಗದಲ್ಲಿ ಅಯಸ್ಕಾಂತಗಳನ್ನು ಸರಿಸುವುದರ ಮೂಲಕ ಸೂಚಕಗಳನ್ನು ಪಾದರಸ ಸ್ತಂಭಗಳ ಮೇಲಂಚುಗಳ ಮೇಲೆ ಬರುವಂತೆ ಮಾಡುತ್ತಾರೆ.
ರೋಧ ಉಷ್ಣತಾಮಾಪಕಗಳು (ರೆಸಿಸ್ಟೆನ್ಸ್ ಥರ್ಮೋಮೀಟರ್ಸ್) ಸಾಮಾನ್ಯವಾಗಿ 300ಲಿ ಸೆಂಟಿಗ್ರೇಡಿಗಿಂತ ಹೆಚ್ಚಿನ ಉಷ್ಣತೆಯನ್ನು ಅಳೆಯಲು ಪಾದರಸ ಉಷ್ಣತಾಮಾಪಕ ಅಷ್ಟು ಉಪಯುಕ್ತವಲ್ಲ. ಅನಿಲ ಉಷ್ಣತಾಮಾಪಕಗಳನ್ನು ಇಲ್ಲಿ ಬಳಸಬಹುದು. ಆದರೆ ಇಲ್ಲಿಯೂ ಎದುರಾಗುವ ಪ್ರಾಯೋಗಿಕ ಅಡಚಣೆಗಳು ಬಹಳ ಇವೆ. ವಿದ್ಯುನ್ನಿರೋಧ ಉಷ್ಣತಾಮಾಪಕಗಳು ಇಂಥಲ್ಲಿ ಹೆಚ್ಚು ಪ್ರಾಯೋಗಿಕ ಮತ್ತು ಉಪಯುಕ್ತವಾಗಿವೆ. ಒಂದು ಲೋಹದ ತಂತಿಯ ಉಷ್ಣತೆಯ ಬದಲಾವಣೆಗಳನ್ನು ಅನುಸರಿಸಿ ಆ ತಂತಿಯ ವಿದ್ಯುನ್ನಿರೋಧದಲ್ಲಿ ಬದಲಾವಣೆಗಳುಂಟಾಗುವುವು. ಇದನ್ನು ನಿಷ್ಕøಷ್ಟವಾಗಿ ಅಳೆಯಬಹುದು. ಈ ತಂತ್ರವನ್ನು ಉಪಯೊಗಿಸಿಕೊಂಡು ರಚಿಸುವ ಉಷ್ಣತಾಮಾಪಕದಲ್ಲಿ ಬಳಸುವ ಲೋಹದ ತಂತಿ ದೀರ್ಘಕಾಲ ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ರೀತಿಯ ಬದಲಾವಣೆಗಳನ್ನು ವ್ಯಕ್ತಪಡಿಸಬೇಕು. ಇಲ್ಲವಾದರೆ ಅಸಂಬದ್ಧ ಫಲಿತಾಂಶಗಳು ದೊರೆತು ಮಾಪಕ ಅಪ್ರಯೋಜಕವಾಗುತ್ತದೆ. ಇದನ್ನು ಗಮನಿಸಿ ಪ್ಲ್ಯಾಟಿನಂ ಲೋಹವನ್ನು ಇಂಥ ಮಾಪಕಗಳ ರಚನೆಯಲ್ಲಿ ಯಶಸ್ವಿಯಾಗಿ ಬಳಸಲಾಗಿದೆ. 

ಚಿತ್ರ-2

	ಪ್ಲ್ಯಾಟಿನಂ ವಿದ್ಯುನ್ನಿರೋಧ ಉಷ್ಣತಾಮಾಪಕವನ್ನು ಸಾಮಾನ್ಯವಾಗಿ 200ಲಿ ಸೆ. ನಿಂದ 1,000ಲಿ ಸೆ. ವರೆಗಿನ ಉಷ್ಣತೆಗಳ ಅಳತೆಯಲ್ಲಿ ಬಲುನಿಷ್ಕøಷ್ಟವಾಗಿ ಉಪಯೋಗಿಸಬಹುದು. ಆದರೆ ಈ ಮಾಪಕ ಅದರ ಪರಿಸರದ ಉಷ್ಣತೆಯ ಮಟ್ಟ ತಲುಪಲು ಕಾಲಾವಕಾಶ ಬೇಕು; ಇದರಲ್ಲಿ ಉಷ್ಣತೆಯನ್ನು ಅಳೆಯಲು ವೇಳೆ ಸಹ ಬೇಕು. ಆದ್ದರಿಂದ ಕ್ಷಿಪ್ರವಾಗಿ ಉಷ್ಣತೆಯನ್ನು ತಿಳಿಯಬೇಕೆಂದಿರುವಲ್ಲಿ ಈ ಉಷ್ಣತಾಮಾಪಕ ಉಪಯೋಗಕಾರಿಯಲ್ಲ.
ಉಷ್ಣವಿದ್ಯುದ್ಯುಗ್ಮ ಉಷ್ಣತಾಮಾಪಕಗಳು (ಥರ್ಮೋಕಪಲ್ ಥರ್ಮೋಮೀಟರ್) ಎರಡು ಭಿನ್ನಲೋಹಗಳ ಸಂಧಿಸ್ಥಾನದಲ್ಲಿ (ಜನ್‍ಕ್ಷನ್) ಉಂಟಾಗುವ ವಿಭವವನ್ನು ಉಪಯೋಗಿಸಿಕೊಂಡು ಉಷ್ಣತಾ ವ್ಯತ್ಯಾಸವನ್ನು ಅಳೆಯುವ ಸಾಧನ. ಈ ಸಾಧನವನ್ನು ಜೋಡಣೆಗೆ ಉಪಯೋಗಿಸುವ ಒಂದು ತಂತಿ ಪ್ಲ್ಯಾಟಿನಂ ಲೋಹದ್ದಾಗಿದ್ದರೆ ಇನ್ನೊಂದು ತಂತಿ 10% ರ್ಹೋಡಿಯಂ ಮಿಶ್ರಿತ ಪ್ಲ್ಯಾಟಿನಂ ಲೋಹದ್ದಾಗಿರುವುದು. ಹಲವು ಸಂದರ್ಭಗಳಲ್ಲಿ ರ್ಹೋಡಿಯಂ ಬದಲು ಇರಿಡಿಯಂನ್ನು ಬಳಸುವುದುಂಟು. ಇಲ್ಲಿ ಜೋಡಣೆಗಳನ್ನು ಬಂಗಾರದ ಬೆಸುಗೆ ಮಾಡಿರುವರು.

ಉತ್ತಾಪಮಾಪನ (ಪೈರೋಮೆಟ್ರಿ); ಅತ್ಯಂತ ಹೆಚ್ಚಿನುಷ್ಣತೆಗಳನ್ನು ಅಳೆಯುವ ವಿಧಾನ. ಇಲ್ಲಿ ಎರಡು ವಿಧಾನಗಳಿವೆ(ವಿಕಿರಣ ವಿಧಾನ (ರೇಡಿಯೇಷನ್) ಮತ್ತು ದ್ಯುತಿ ವಿಧಾನ (ಆಪ್ಟಿಕಲ್). ಇವುಗಳಿಂದ ದೊರೆಯುವ ಅಳತೆಗಳು ಹೆಚ್ಚು ನಿಷ್ಕøಷ್ಟವಾಗಿವೆ. ಯಾವುದೇ ಒಂದು ಅತ್ಯುಷ್ಣ ವಸ್ತುವಿನ ಉಷ್ಣತೆ 600ಲಿ ಸೆ. ಇದ್ದಾಗ ಕೆಂಡದಂತೆ ಕೆಂಪಾಗಿ ಕಾಣುತ್ತಿದ್ದರೆ ಅದರ ಉಷ್ಣತೆಯನ್ನು ಏರಿಸಿದಂತೆ ಅದರ ಬಣ್ಣ ಕಿತ್ತಳೆಗೆ ತಿರುಗಿ ಮುಂದೆ 1,400ಲಿ ಸೆ. ನಲ್ಲಿ ಬಿಳಿಯಾಗಿ ಪ್ರಕಾಶಿಸತೊಡಗುತ್ತದೆ. ಉಷ್ಣತೆಯ ಏರಿಕೆಯೊಡನೆ ಉಂಟಾಗುವ ಬಣ್ಣ ವ್ಯತ್ಯಾಸವೇ ದ್ಯುತಿವಿಧಾನ ಉತ್ತಾಪಮಾಪನದ ಹಿನ್ನೆಲೆಯ ಭಾವನೆ. 800ಲಿ-1,400ಲಿ ಸೆ. ಮಿತಿಯಲ್ಲಿ ಮೊದಲಿನ ಸಾಧನವನ್ನೂ 1,063ಲಿ-1,400ಲಿ ಸೆ. ಮಿತಿಯಲ್ಲಿ ಎರಡನೆಯ ಸಾಧನವನ್ನೂ ಉಪಯೋಗಿಸಬಹುದು. 

ಅಳೆಯಬೇಕಾಗಿರುವ ಉಷ್ಣತೆಯ ಮಿತಿಗಳನ್ನೂ ವಸ್ತುಗಳನ್ನೂ ಅನುಸರಿಸಿ ಉಷ್ಣತಾಮಾಪಕಗಳ ನಿರ್ಮಾಣವಿದೆ.

(ಕೆ.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ